Saturday 17 January 2015

ರಾಮಲಿಂಗ ರೆಡ್ಡಿ ಸಾಹೇಬ್ರೆ ಕಾಮಣ್ಣ ರಿಂದ ರಕ್ಷಿಸಿ

" ಅಕ್ಕ ,ತಂಗಿ ಎಂದು ಭಾವಿಸಿ  ದಯವಿಟ್ಟು ಈ ಹಿಂಸೆ ಇಂದ ಮುಕ್ತ ಗೊಳಿಸಿ"

                          ಇಲ್ಲಿ ಕ್ಲಿಕ್ ಮಾಡಿ 

     https://www.youtube.com/watch?v=KlRUudOCKzk



                               

ರಾಮಪ್ಪ  : ಏನ್ ಮಾರಾಯ ? ಏನ್ ನೋಡುತ್ತಾ  ಇದ್ದಿ?

ಶಿವಣ್ಣ :    ಯಾರೂ ದಾರಿ ಅಂತ  ಲಿಂಕ್ ಕಳಿಸಿದ್ದಾರೆ . ಡೌನ್ ಲೋಡ್  ಆಗ್ತಾ ಇದೆ . ಬಾ ನೋಡೋಣ 

ರಾಮಪ್ಪ  : ಅದು ಟಿವಿ ೯ ನ್ಯೂಸ್ ಮಾರಾಯ..  
(ಪೂರ್ತಿ ನೋಡಿ ಅದ ಮೇಲೆ )

ಶಿವಣ್ಣ : ಏನ್ ಅರ್ಜುನ್ , ನನ್ನ ತಂಗಿ ಮತ್ತೆ ತಾಯೀ ನೂ  ಬಸ್ ನಲ್ಲೆ  ಹೋಗ್ತಿದ್ದಾರೆ ಕಣೊ , ಅವರ ಕಷ್ಟ ನೋಡೋಕೆ ಆಗ್ತಾ ಇಲ್ಲ ಕಣೊ .. ಇದಕ್ಕೆ ಏನು ಪರಿಹಾರ ? ನಮ್ಮ ಓಟ್ ತೆಕೊಂಡ ಮತ ಬಿಕ್ಷುಕರಿಗೆ ಇದು ಕಾಣಿಸ್ತಾನೆ ಇಲ್ಲ . ಯಾರ್ ಈ ಕಷ್ಟ ಪರಿಹರಿಸಬಹುದು ಕಣೊ ? ಮದ್ಯಮದವರೂ ವರದಿ ಮಾಡಿ ಒಂದು ವರ್ಷ ಕಳೆಯಿತು . ಇನ್ನು ಸಾರಿಗೆ ಇಲಾಖೆ ಕ್ರಮ ಕೈಗೊಂಡಿಲ್ಲ.. ಮಂಡೆ ಬಿಸಿ ಆಗುತ್ತೆ ಮಾರಾಯ ... ಎಸ್ಟೆಲ್ಲ ಮಹಿಳ ಶೋಷಣೆ ಕಾನೂನು ಇದ್ರೂ . ಎಲ್ಲಿದೆ ಮಹಿಳಾ ಆಯೋಗ , ಮಂತ್ರಿ ಕಂತ್ರಿ , ಅದಿಕಾರಿಗಳು ? 

ರಾಮಪ್ಪ : ಹೌದು ಮಾರಾಯ .ನಮ್ಮ ಜನ ಮತ ಬಿಕ್ಷುಕರಿಗೆ ಮತ ಕೊಡ್ತಾರೆ . ಅವರನ್ನು ಪ್ರಶಿಸುವ ಗೋಜಿಗೆ ಹೋಗೋಲ್ಲ ಜನ . ಆದ್ರೆ ಮಧ್ಯಮ ವರದಿ ಮಾಡುತ್ತೆ .. ನೋಡಿ ಸುಮ್ಮನೆ ಆಗ್ತಾರೆ ..  ಜನರು ಮಾತಾಡ್ತಾ ಇಲ್ಲ ಅದಕ್ಕೆ  ಅಧಿಕಾರಿ ಗಳು ಲಂಚ , ಅವ್ಯವಹಾರ ನಡೆಸುವುದು .. ಮಾರಾಯ .. 

ಶಿವಣ್ಣ : ಮತ್ತೆ ಏನ್ ಮಾಡಬೇಕು ಅಂತಿಯ ? ಮಾತಾಡೋಕ್ಕೆ ಅವರು ಸಿಗ್ತಾರ? ಗುರು 

..
ರಾಮಪ್ಪ:  ನಾನ್ ಫೇಸ್ ಬುಕ್ ನಲ್ಲಿ  ನೋಡಿದ ನೆನೆಪು ಮಾರಾಯ .ಒಂದು "" ದಾರಿ""  ಅಭಿಯಾನ ನೋಡಿದ್ದೇನೆ ಮಾರಾಯ , ನಿನ್ನ ಮೊಬೈಲ್ ನಲ್ಲಿಯೇ ಮಾತನಾಡಿ , ಯಸ್ . ಯಂ . ಯಸ್ ,ಮೇಲ್ , ಟ್ವಿ ಟ್  ಕಳಿಸಿ ಸಮಾಜ ಸೇವೆ ಮಾಡಬಹುದಂತೆ .  ನಮ್ಮ ಸಂವಿದಾನ ದಲ್ಲಿ ಆಡಳಿತ ನಡೆಸುವವರನ್ನು ನೇರ  ಪ್ರಶ್ನಿಸುವ ಹಕ್ಕು ನು ಕೊಟ್ಟಿದೆ   
ಒಂದು ಕೆಲಸ ಮಾಡು ,, ನಿನ್ನ ಮೊಬ್ಲೆ ತೆಗೆದು ಗೂಗಲ್ ಓಪನ್ ಮಾಡಿ ನಮ್ಮ ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿ , ಮತ್ತು ಅವರ ಇಲಾಖಾ ಅದಿಕಾರಿ ಯಾ ಇಮೇಲ್ ಮತ್ತೆ ಮೊಬೈಲ್  ಸಂಖ್ಯೆ , ತೆಗೊಳ್ಳೋಣ .. ಮತ್ತೆ ಈ ರೀತಿ ಮಾಡಿ ತೊಂದ್ರೆ ಗೆ ಸಿಕ್ಕಿದವತ್ರ ತಿಳಿಸೋಣ . 

ಶಿವಣ್ಣ:  ಅರ್ಜುನ್  ಇಮೇಲ್ ಮತ್ತೆ ಮೊಬೈಲ್  ಸಂಖ್ಯೆ ಸಿಕ್ತು ಮಾರಾಯ .  ಸರಿ ಏನ್ ಮೇಲ್ ಮಾಡ್ ಬೇಕು ?

 ರಾಮಪ್ಪ ;- ನೋಡಿ ಸ್ವಾಮಿ ರಾಮಲಿಂಗ ರೆಡ್ಡಿ ಸಾಹೇಬ್ರೆ .. ಟಿ . ವಿ ೯ ನವರು  ಬಸ್ ನಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಬಗ್ಗೆ  ವರದಿ ಮಾಡಿ ಸುಮಾರು ದಿನಗಳು ಅಯೆತು .. ಈಗಲೂ ತೊಂದ್ರೆ ಕಡಿಮೆ ಆಗ್ಲಿಲ್ಲ , ಸಂಬಂದ ಪಟ್ಟ ಅದಿಕಾರಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ , ನಿಮ್ಮಲ್ಲಿ ಪರಿಹಾರ ಕೊಡಲು ಸಾಧ್ಯ ವಿಲ್ಲದಿದ್ದರೆ  ಸಾರಿಗೆ ಮಂತ್ರಿ ಪದವಿ ಬಿಟ್ಟು ಬೇರೆಯ ಒಳ್ಳೆ ಜವಾಬ್ದಾರಿ ಮನುಷ್ಯ ರಿಗೆ ಕೊಡಿ . ನಮ್ಮ  ಊರಿನ ಅಕ್ಕ ತಂಗಿ ತೊಂದ್ರೆ ಯಗುತ್ತದೆ . ಈ ಪತ್ರದಲ್ಲಿ ಟಿವಿ ೯ ಮಧ್ಯಮ ದ ವರದಿ ಯನ್ನು ಕಳಿಸಿದ್ದೇನೆ .. ದಯವಿಟ್ಟು  ನಿಮ್ಮ ಮೂರು ನಿಮಿಷ ರಾಜ್ಯ ದ  ಜನಕೊಸ್ಕರ ಟೈಮ್ ಕೊಡಿ .. ಶ್ರೇಷ್ಠ ,ಉಚ್ಚ ,ನ್ಯಾಯಾಲಯ , ಸಾರಿಗೆ ಕಾನೂನು ಸಿಟಿ ಗಿಂತ ಹೆಚ್ಚು ಜನ ಹಾಕಬಾರದು ಹೇಳ್ತವೆ , ನಿಮ್ಮ ಇಲಾಖೆ ಅದಿಕಾರಿ ಏನ್ ಮಾಡ್ತಾರೆ ? ಕೇಳಿದ್ದಿರ? ಮೇಲ್ ಹಾಕು

(ಸ್ವಲ್ಪ ಹೊತ್ತದ್ಮೇಲೆ )
ಶಿವಣ್ಣ  : ಟೈಪ್ ಅಯೀತು ಮಾರಾಯ 


ರಾಮಪ್ಪ :  ಟು ಅಡ್ರಸ್ ಮಂತ್ರಿ ರಾಮಲಿಂಗ ರೆಡ್ಡಿ  9480143777        ಹಾಕಿ . ಸಿ .ಸಿ  ಯನ್ನು ಸರಕಾರದ ಪ್ರದಾನ ಕಾರ್ಯದರ್ಶಿprstrans-home@karnataka.gov.in , ಆಯುಕ್ತ ರು transcom@nic.in ,proctr-trans- ka@nic.in   ದಕ್ಷಿಣ ಕನ್ನಡ ಜಿಲಾದಿಕಾರಿ  A .b ibrahim district commissioner mangalore:- office 2220588 222058 mobile 99449225000 email:- dc.mnglr@gmail.com, dc.mnglr@gmail.com ,ಇಲ್ಲಿನ ಸಾರಿಗೆ ಅದಿಕಾರಿಗೆ  ಹಾಕು ಮಾರಾಯ .. ಮತ್ತೆ  ಕರೆ /ಯಸ್ .ಮ್ . ಯಸ್  ಮಾಡಿ ಮೇಲ್ ಮಾಡಿದ್ದೇವೆ . ಕೂಡಲೇ ಕ್ರಮ ವಹಿಸಿ ಒತ್ತಾಯಿಸೋಣ 

ಶಿವಣ್ಣ: ಸರಿ ಸೆಂಡ್ ಅಯೀತು ಮಾರಾಯ , ಬಾ ಎಲ್ಲರನ್ನು ಈ ತರ ಅರ್ಜಿ ಸಚಿವರ /ಇಲಾಖೆ ಗಮನ ತರೋಣ , ಅಲ್ಲ ಮಾರಾಯ ,ನಮಗೂ ಸಂವಿದಾನ ಇಷ್ಟು ಸ್ವಾತಂತ್ಯ ಕೊಟ್ಟಿದೆ  ಇವತ್ತೇ ಗೊತ್ತಾಗಿದ್ದು , ನಿನಗೆ , ಮತ್ತು ವರದಿ ಮಾಡಿದ  ಟಿವಿ ೯ ಗೂ ಥ್ಯಾಂಕ್ಸ್ ಮಾರಾಯ , ಜೈ ಹಿಂದ್




'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ  ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗ .ಕಾರ್ಯಾಂಗ,ನ್ಯಾಯಾಂಗ ,ಪತ್ರಿಕಾ ರಂಗ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ  ಸಂವಿಧಾನವು  ಶ್ರೇಷ್ಠ ವಾಗಿರುತ್ತದೆ.""    DR B. R. Ambedkar 

 ಪ್ರಕಟಣೆ :- ದಾರಿ, ""ಮಾತನಾಡು ಕರ್ನಾಟಕ ಮಾತನಾಡು"" ಅಭಿಯಾನ 


https://www.youtube.com/watch?v=KlRUudOCKzk

No comments:

Post a Comment